Wednesday, January 5, 2011

ಬೆಳಗು

ಬೆಳಗು

ಬೆಳಗು

ಬೆಳಗು
ಮಗದೊಮ್ಮೆ ಕಿರುತೆರೆಯಲ್ಲಿ ಕಾಲಿಟ್ಟಿರುವ ರಿಯಲ್ ಅಲ್ಲದ ರಿಯಾಲಿಟಿ ಶೋಗಳು 
ಅತಿ ಹೆಚ್ಚು ಪ್ರಚಾರ ಪಡೆದಿರುವ ಈ ರಿಯಾಲಿಟಿ ಶೋಗಳು ಮುಗ್ದ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂದರೇ
ಜನರನ್ನು ತಮ್ಮತ್ತ ಸೆಳೆಯಲು, ಟಿ.ಆರ್. ಪಿ. ಹೆಚ್ಚಿಸಿಕೊಳ್ಳಲು ವಾಹಿನಿಗಳು ತಾ ಮುಂದು, ನಾ ಮುಂದು ಎಂದು ಕಿತ್ತಾಟ ಶುರುಮಾಡಿವೆ.
ಈ ರಿಯಾಲಿಟಿಶೋಗಳಲ್ಲಿ ಹಿಂದಿಯ ಸಚ್ ಕಾ ಸಾಮ್ನ, ರಾಕಿ ಕಾ ಸ್ವಯಂವರ, ಎಮೋಷನಲ್ ಅತ್ಯಾಚರ್, ಇತ್ತೀಚಿಗೆ ಎನ್.ಡಿ.ಟಿ.ವಿ ಇಮ್ಯಾಜಿನ್ನಲ್ಲಿ  ಪ್ರಸಾರವಾಗುತ್ತಿರುವ ರಾಕಿ ಕಾ ಇನ್ಸಾಫ್ ನಂತಹ ಕಾರ್ಯಕ್ರಮಗಳಿಂದ ಎಷ್ಟೋ ಜನರು ತೊಂದರೆಗೆ ಒಳಗಾಗಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ. ಕನ್ನಡದಲ್ಲಿಯೂ  ಇಂತಹ ಕಾರ್ಯಕ್ರಮಗಳು ಕೆಲವು ತಿಂಗಳುಗಳ ಹಿಂದೆ ಪ್ರಸಾರವಾಗುತಿದ್ದವು ಕೆಲವು ಕಾರಣಗಳಿಂದ ಈ ತರಹದ ಶೋಗಳನ್ನೂ ವಾಹಿನಿಗಳಲ್ಲಿ ಬಿತ್ತರಿಸುತ್ತಿರಲಿಲ್ಲ. ಮತ್ತೇ ಅಂತಹ ರಿಯಾಲಿಟಿ ಶೋಗಳು ಕನ್ನಡ ವಾಹಿನಿಗಳಲ್ಲಿ ಪ್ರಸಾರ ಕಾಣುತ್ತಿವೆ. ಉದಾಹರಣೆಗೆ: ಜೀ ಕನ್ನಡ ವಾಹಿನಿಯ ಬದುಕು ಜಟಾಕ ಬಂಡಿ ಯಂತಹ ಶೋಗಳು ಜನರ ಮನಸ್ಸಿನ ಮೇಲೆ ಅಗಾಧ ಪರಿಣಾಮವನ್ನು ಬಿರುತ್ತಿವೆ. ದಯವಿಟ್ಟು ಇಂತಹ ಕಾರ್ಯಕ್ರಮಗಳಿಗೆ ಜನರು ಪ್ರೋತ್ಸಾಹ ನೀಡಬಾರದು.   
ಅಪರೇಷನ್ ಕಮಲದಿಂದ ಬಿಜೆಪಿಗೆ ವರದಾನ
ಜಿ.ಪಂ/ತಾ.ಪಂ ಚುನಾವಣೆಗಳಲ್ಲಿ ಅತಂತ್ರಗೊಂಡಿರುವ ಜಿಲ್ಲೆಗಳಲ್ಲಿ ಬಿಜೆಪಿ ನಡೆಸುತ್ತಿರುವ ಅಪರೇಷನ್ ಕಮಲದಿಂದ ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. ಅಧಿಕಾರದ ಲಾಲಸೆಯಿಂದ ಹಣದ ಚೀಲವನ್ನು ಹಿಡಿದ ಪ್ರತಿನಿಧಿಗಳು ಕ್ಷೇತ್ರಗಳಲ್ಲಿ ಕತ್ತೆ, ಕುದರೆ ವ್ಯಾಪಾರಕ್ಕೆ ನಿಂತಿದ್ದಾರೆ.